ವಿದ್ಯೆ ಎಂದಡೆ ಭಾರತ-ರಾಮಾಯಣವಲ್ಲ.
ಭಾರತವೆಂದಡೆ ಭರತದೇಶದಲ್ಲಿ ಜನಿಸಿ,
ಕಾಮಿನಿಯರ ಸೋಗುಹಾಕಿ, ಆ ದೇಶಕ್ಕಧಿಪತಿಯಾದ
ಕಥೆಯೆ ಭಾರತವಯ್ಯಾ.
ರಾಮಾಯಣವೆಂದಡೆ,
ಆದಿನಾರಾಯಣನು ಪೃಥ್ವಿಯೊಳು ಹುಟ್ಟಿ,
ರಾಮನೆಂಬಭಿಧಾನವ ಧರಿಸಿ,
ಸರ್ವರಂತೆ ಪ್ರಪಂಚವ ಮಾಡಿ,
ರಾಕ್ಷಸರ ಗರ್ವವನಳಿದುದೆ ರಾಮಾಯಣ.
ಮಾಡಿ ಉದ್ಧಟವಾದಲ್ಲಿ ಕಾಲಾಂತರದಲಾದರೂ
ಕುರುಹಿನೊಳಗಾದವಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Vidye endaḍe bhārata-rāmāyaṇavalla.
Bhāratavendaḍe bharatadēśadalli janisi,
kāminiyara sōguhāki, ā dēśakkadhipatiyāda
katheyē bhāratavayya.
Rāmāyaṇavendaḍe,
ādinārāyaṇanu pr̥thviyoḷu huṭṭi,
rāmanembabhidhānava dharisi,
sarvarante prapan̄ca māḍi,
rākṣasara garvavanaḷidude rāmāyaṇa.
Māḍi ud'dhaṭavādadalli kālāntaradalādarū
kuruhinoḷagādavayyā,
kapilasid'dhamallikārjunā.