Index   ವಚನ - 1685    Search  
 
ಲಿಂಗ ಹೋದಡೇನು, ಗುರುವುಂಟೆಂಬ ಬಾಲಭಾಷೆಯ ಕೇಳಲಾಗದು; ಕೇಳಿದವನ ಸಂಗ ಸಿಂಗಿ ಕಾಳಕೂಟ ವಿಷವು; ಆತನ ಸಂಗದಲ್ಲಿರಲು ಪಂಚಮಹಾಪಾತಕ ತಪ್ಪದು, ಕಪಿಲಸಿದ್ಧಮಲ್ಲಿಕಾರ್ಜುನಾ.