Index   ವಚನ - 1686    Search  
 
ಲಿಂಗವ ಧರಿಸಿದ ಯೋಗಿಗೆ ಅಂಗನೆಯರು ಲಿಂಗದ ರಾಣಿವಾಸ. ಲಿಂಗವ ಧರಿಸಿದ ಭೋಗಿಗೆ ಕಾಷಾಯಾಂಬರಧಾರಿಗಳು ರುದ್ರಗಣಂಗಳು. ಲಿಂಗವ ಧರಿಸಿದ ಜೀವಜಾಲವು ಕಪಿಲಸಿದ್ಧ ಮಲ್ಲಿಕಾರ್ಜುನನೆಂದು ನಂಬಿದೆ ನೋಡಾ, ಗುರುವೆ ಚೆನ್ನಬಸವಣ್ಣನೆ.