ವಚನ - 1694     
 
ಆಕಾಶದಲ್ಲಿಯ ಕಪ್ಪು ಅಂಗೈ ತಿನ್ನೆಂದಡೆ ತಿಂಬುವುದೆ ಅಯ್ಯಾ? ಮರೀಚಿಯ ನೀರು ಮಡಿಯ ಕ್ರೀಯಕ್ಕೆ ಬಾ ಎಂದಡೆ ಬರುವುದೇನೊ ಅಯ್ಯಾ? ಎಲೆ ಲಿಂಗಮೂರ್ತಿ ಕಪಿಲಸಿದ್ಧಮಲ್ಲಿಕಾರ್ಜುನಾ.