Index   ವಚನ - 1702    Search  
 
ಅನುಭವವೆಂಬುದದು ಅನುಭಾವಿಕಗಲ್ಲದೆ ಹೊತ್ತಗೆಯಲ್ಲಿಲ್ಲ ನೋಡಾ ಮಾನವಾ. ರತ್ನಂಗಳು ಸಮುದ್ರದಲ್ಲಲ್ಲದೆ ಕೀಳು ಕುಲ್ಯಾದಿಗಳಲ್ಲಿಲ್ಲ ನೋಡಾ, ಮಾನವಾ. ನವಮಂತ್ರಂಗಳ ಮರ್ಮವದು ಗುರುಮುಖದಲ್ಲಲ್ಲದೆ, ಬರಿಯ ಪುರಾಣಂಗಳಲ್ಲಿಲ್ಲ ನೋಡಾ, ಮಾನವಾ. ಇಂದಿನ ಪ್ರಮಥರು ಮುಂದೆ ಬಂದಹರೆಂಬ ಭ್ರಮೆ ಬೇಡ ನೋಡಾ, ಮಾನವಾ. ನೀನಂದಿಂಗೆನ್ನದೆ ಕಪಿಲಸಿದ್ಧಮಲ್ಲಿಕಾರ್ಜುನನ ನಂಬು ನೋಡಾ, ಮಾನವಾ.