ಲಿಂಗಲೀಲೆ ಹೇಳುವಡೆನಗಸಾಧ್ಯ ನೋಡಾ, ಅಯ್ಯಾ.
ಭಕ್ತನ ಹಸ್ತದಲ್ಲಿ ಜಂಗಮವಾಗಿ ನೆಲೆಸಿದನಯ್ಯಾ ಲಿಂಗಮೂರ್ತಿ;
ಜಂಗಮದ ಹಸ್ತದಲ್ಲಿ ಭಕ್ತನಾಗಿ ನೆಲೆಸಿದನಯ್ಯಾ ಲಿಂಗಮೂರ್ತಿ.
ಜಂಗಮ ಪೂಜಿಸಿದ ಫಲ ಸಂಪದಾದಿ ಮೋಕ್ಷ ಕೊಟ್ಟಿತ್ತು ಭಕ್ತಂಗೆ;
ಭಕ್ತ ಪೂಜಿಸಿದ ಫಲ ಜ್ಞಾನಸಂಪದಾದಿ ವೈರಾಗ್ಯ ಕೊಟ್ಟಿತ್ತು
ಜಂಗಮಂಗೆ.
ಇಂತಪ್ಪ ಲಿಂಗಮೂರ್ತಿಯ ನೋಡಿ ನೋಡಿ,
ರೋಮಂಗಳೆಲ್ಲ ನಯನಂಗಳಾದವು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Liṅgalīle hēḷuvaḍenagasādhya nōḍā, ayyā.
Bhaktana hastadalli jaṅgamavāgi nelesidanayyā liṅgamūrti;
jaṅgamada hastadalli bhaktanāgi nelesidanayyā liṅgamūrti.
Jaṅgama pūjisida phala sampadādi mōkṣa koṭṭittu bhaktaṅge;
bhakta pūjisida phala jñānasampadādi vairāgya koṭṭittu
jaṅgamaṅge.
Intappa liṅgamūrtiya nōḍi,
rōmaṅgaḷella nayanagaḷādavu nōḍā,
kapilasid'dhamallikārjunā.
ಸ್ಥಲ -
ಶರಣನ ವಾಗ್ರಚನಪ್ರತಾಪಸ್ಥಲ