Index   ವಚನ - 1766    Search  
 
ತಿಳಿಯದೆ ಜಪಿಸಿದ ಮಂತ್ರ ನಿಷ್ಫಲವಾದುದು ನೋಡಾ, ಗುರುವೆ. ಪ್ರಣವಪಲ್ಲವಗಳರಿದು ಜಪಿಸುವುದದು ಸಫಲ ನೋಡಾ, ಗುರುವೆ. ಇದರಂದವ ತೋರಿದ ಎನ್ನ ಗುರು ಚೆನ್ನಬಸವ ನೋಡಾ, ಗುರುವೆ. ಕಪಿಲಸಿದ್ಧಮಲ್ಲಿಕಾರ್ಜುನಾ.