ವಚನ - 1768     
 
ಜಪಿಸಬಾರದು ಜಪಿಸಬಾರದು ಕುಮಂತ್ರಂಗಳ. ಜಪಿಸಬಾರದು ಜಪಿಸಬಾರದು ಮೋಹನದ ಮಂತ್ರಂಗಳ. ಜಪಿಸಬಾರದು ಜಪಿಸಬಾರದು ಮಾರಣಮಂತ್ರಂಗಳ. ಜಪಿಸಬೇಕು ಜಪಿಸಬೇಕು, `ಕಪಿಲಸಿದ್ಧಮಲ್ಲಿಕಾರ್ಜುನಾಯ ನಮಃ' ಎಂದು ಕೇಳಾ ಕೇದಾರ ಗುರುದೇವಾ.