•  
  •  
  •  
  •  
Index   ವಚನ - 1782    Search  
 
ನವಗ್ರ[ಹ] ವರ್ಣಂಗಳ ಧ್ಯಾನವೆಂಬುವುದು ನವಸಹಸ್ರಕರ್ಣಿಕೆಯಲ್ಲಿರುವ ಪರಂಜ್ಯೋತಿ ರೂಪುಪ್ರಾಪ್ತಿ ನೋಡಾ. ದ್ವಾದಶಾದಿತ್ಯವರ್ಣಂಗಳ ಧ್ಯಾನವೆಂಬುವುದು ದ್ವಾದಶಾದಿತ್ಯರ ಪ್ರಭೆಯ ನುಂಗಿದ ಮಹಾಲಿಂಗಮೂರುತಿ ಪ್ರಾಪ್ತಿ ನೋಡಾ. ಷೋಡಶಕಲಾವರ್ಣಂಗಳ ಧ್ಯಾನವೆಂಬುವುದು ಷೋಡಶಕಲಾಚಂದ್ರಧರ ಕಪಿಲಸಿದ್ಧಮಲ್ಲಿಕಾರ್ಜುನ ತಾನೆ ನೋಡಾ. ಕೇದಾರ ಗುರುದೇವಾ.
Transliteration Navagra[ha] varṇaṅgaḷa dhyānavembuvudu navasahasrakarṇikeyallide paran̄jyōti rūpuprāpti nōḍā। dvādaśādityavarṇaṅgaḷa dhyānavembuvudu dvādaśādityara prabheya nuṅgida mahāliṅgamūruti prāpti nōḍā. Ṣōḍaśakalāvarṇaṅgaḷa dhyānavembuvudu ṣōḍaśakalācandradhara kapilasid'dhamallikārjuna tāne nōḍā. Kēdāra gurudēva.