ವಚನ - 1784     
 
ಅನಿರ್ವಾಚ್ಯವೆ ವಾಚ್ಯಪ್ರಣವವಾಗಿ ನಿಂದಿತ್ತು ; ವಾಚ್ಯವೆ ವಚಿಸುವುದಕ್ಕೆ ಮೂಲ ಪ್ರಣವವಾಯಿತ್ತು ; ಮೂಲವೆ ಭೂತಾಂಗ ಪಂಚಾಕ್ಷರವಾಯಿತ್ತು ; ಪಂಚಾಕ್ಷರವೆ ಪಂಚಮುಖವಾಯಿತ್ತು ; ಪಂಚಮುಖಂಗಳೆ ಪಂಚಕರಣಂಗಳಾಯಿತ್ತು ; ಪಂಚಕರಣಂಗಳೆ ಪಂಚವರ್ಣವಾಯಿತ್ತು ; ಪಂಚವರ್ಣವೆ ಪ್ರಪಂಚ ರಚನೆ ನೋಡಿ ಎನ್ನ ಚಿತ್ತ ಚಂಚಲವಾಯಿತ್ತಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.