Index   ವಚನ - 1794    Search  
 
ಬಂದೆ [ಹೆ] ನೆಂದು ಹೇಳಿದ ಬಳಿಕ, ಬಾರದೆ ಇಪ್ಪನೆ ಹೇಳಾ, ಭಾಳಲೋಚನನು? ನಿಂದೆಹೆನೆಂದು ನಿರೂಪಿಸಿದ ಬಳಿಕ ನಿಲ್ಲದಿಪ್ಪನೆ! ಇಂದುಧರ ಬಂದಡೆ ಬಹು ಲೇಸು, ನಿಂದಡೆ ಎರಡು ಲೇಸು. [ಬಂದೆಹೆನೆಂದು] ಬಾರ[ದಿದ್ದಡೆ], ನಿಂ[ದೆಹೆನೆಂ]ದು ನಿಂದಿರದಿದ್ದಡೆ, ಇಂದು ಈ ಪೂಜೆ ಸಮಾಪ್ತಿ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.