ವಚನ - 1838     
 
ಆ ಶರಣನ ರೂಹು ಈ ಶರಣನ ಹಸ್ತಕಮಲದಲ್ಲಿ ತೋರುತ್ತಿದೆ; ಈ ಶರಣನ ರೂಹು ಆ ಶರಣನ ಪಾದದಲ್ಲಿ ತೋರುತ್ತಿದೆ. ಆ ಶರಣನ ಪಾದ ಈ ಶರಣನ ಮಹಾಹೃದಯದಲ್ಲಿ ಮಹಾಲಿಂಗ, ನೇತ್ರದಲ್ಲಿ ಶಿವಲಿಂಗವಾಗಿ, ತೋರಿದ ಜಗತ್ತಿಗೆ ವಿಶ್ವೋದರಿಯಾಗಿ ತೋರಿತ್ತು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.