ಆಚಾರವಿಲ್ಲದವನ ಗುರು ಕಂಡಡೆ,
ವಿಚಾರಿಸಿ ನೋಡನು ಜ್ಞಾನಾಜ್ಞಾನದಲ್ಲಿ.
ಆಚಾರವಿಲ್ಲದ ಗುರು, ಆಚಾರವಿಲ್ಲದ ಶಿಷ್ಯ
ಇವರೀರ್ವರು ಚರಿಸಿ ಬೆಡಗಿನ ಭವಕ್ಕೆ ಗುರಿಯಾದರು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಲಿಂಗವೆ.
Transliteration Ācāravilladavana guru kaṇḍaḍe,
vicārisi nōḍanu jñānajñānadalli.
Ācāravillada guru, ācāravillada śiṣya
ivarīrvaru carisi beḍagina bhavakke guriyādaru nōḍā,
kapilasid'dhamallikārjunaliṅgave.