ಎಲ್ಲರು ಶಿವಮಂತ್ರವ ಜಪಿಸುವುದಕ್ಕಿಂತ,
ಎಮ್ಮಮ್ಮನವರ ಮಂತ್ರವ ಜಪಿಸಿ ಸೇವೆಯಲ್ಲಿರಲಾರರು
ನೋಡಾ, ಮನುಮುನೀಶ್ವರರು.
ಎಲ್ಲರು ಶಿವಮಂತ್ರವ ಜಪಿಸುವುದಕ್ಕಿಂತ
ಎಮ್ಮಮ್ಮನವರ ಮಂತ್ರ
`ಸರ್ವಮಂಗಳಾಯೈ ಶಿವಾಯೈ ಜಗದಂಬಾಯೈ
ಜಗದ್ವಂದ್ಯಜಗದಾಧಾರಾಯೈ
ನಮೋ ನಮಃ!' ಎನ್ನರು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ, ಮಹಾಪ್ರಮಥರು.
Art
Manuscript
Music
Courtesy:
Transliteration
Ellaru śivamantrava japisuvudakkinta,
em'mam'manavara mantrava japisi sēveyalliralāraru
nōḍā, manumunīśvararu.
Ellaru śivamantrava japisuvudakkinta
em'mam'manavara mantra
`sarvamaṅgaḷāyai śivāyai jagadambāyai
jagadvandyajagadādhārāyai
namō namaḥ!' Ennaru nōḍā,
kapilasid'dhamallikārjunā, mahāpramatharu.
ಸ್ಥಲ -
ಶರಣನ ವಾಗ್ರಚನಪ್ರತಾಪಸ್ಥಲ