ಎಂಟು ಮಣಿಯ ಮನೆಯಲ್ಲಿ ಕಂಟಕವಿಲ್ಲದ ಮೂರ್ತಿ
ತಾ ನಾಟ್ಯವ ಮಾಡುತ್ತಿದೆ ನೋಡಾ.
ಆ ಎಂಟು ಮಣಿಯಲ್ಲಿ ತನ್ನಂಟು ಇಲ್ಲದೆ,
ತಾ ಸ್ವತಂತ್ರ ನಾಟ್ಯನಾಗಿ ಆಡುತ್ತಿಹ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನ ಮೂರ್ತಿಯು.
Transliteration Eṇṭu maṇiya maneyalli kaṇṭakavillada mūrti
tā nāṭyava māḍuttide nōḍā.
Ā eṇṭu maṇiyalli tannaṇṭu illade,
tā svatantra nāṭyanāgi āḍuttiha nōḍā,
kapilasid'dhamallikārjuna mūrtiyu.