Index   ವಚನ - 1904    Search  
 
ವೇದವನೋದಿ ವೇದಾಧ್ಯಯನವ ಮಾಡಿದಡೇನು, ಬ್ರಾಹ್ಮಣನಾಗಬಲ್ಲನೆ? ಬ್ರಹ್ಮವೇತ್ತುಗಳ ಶುಕ್ಲಶೋಣಿತದಿಂದ ಜನಿಸಿದಡೇನು, ಬ್ರಾಹ್ಮಣನಾಗಬಲ್ಲನೆ? ಯಜನಾ[ದಿ ಇ] ಷ್ಟ ಷಟ್ಕರ್ಮಂಗಳ ಬಿಡದೆ ಮಾಡಿದಡೇನು, ಬ್ರಾಹ್ಮಣನಾಗಬಲ್ಲನೆ? `ಬ್ರಹ್ಮ ಜಾನಾತಿ ಇತಿ ಬ್ರಾಹ್ಮಣಃ' ಎಂಬ ವೇದವಾಕ್ಯವನರಿದು, ಬ್ರಹ್ಮಭೂತನಾದಾತನೆ ಬ್ರಾಹ್ಮಣ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.