ವಚನ - 1906     
 
ಶಿಷ್ಯನೆಂಬ ವನಕ್ಕೆ ವಸಂತ ನೋಡಾ ಗುರು. ಶಿಷ್ಯನೆಂಬ ತಿಮಿರಕ್ಕೆ ಜ್ಯೋತಿ ನೋಡಾ ಗುರು. ಶಿಷ್ಯನೆಂಬ ರಾತ್ರಿಗೆ ಸೂರ್ಯ ನೋಡಾ ಗುರು. ಶಿಷ್ಯನೆಂಬ ನನಗೆ ಪ್ರಕೃಷ್ಟ ಪ್ರಮಥ ಚಿಂತಾಮಣಿ ಚೆನ್ನಬಸವ ಗುರು, ಕಪಿಲಸಿದ್ಧಮಲ್ಲಿಕಾರ್ಜುನಾ.