Index   ವಚನ - 1915    Search  
 
ಗುರುಸಾಹಿತ್ಯ ಚೆನ್ನಬಸವಂಗಾಯಿತ್ತು ; ಲಿಂಗಸಾಹಿತ್ಯ ಬಸವಂಗಾಯಿತ್ತು ; ಜಂಗಮಸಾಹಿತ್ಯ ಅಲ್ಲಮದೇವಂಗಾಯಿತ್ತು ; ಪ್ರಸಾದಸಾಹಿತ್ಯ ಬಿಬ್ಬಿಬಾಚರಸಂಗಾಯಿತ್ತು ; ಪಾದೋದಕಸಾಹಿತ್ಯ ಹೊಡೆಹುಲ್ಲ ಬಂಕಯ್ಯಂಗಾಯಿತ್ತು ; ಭಸ್ಮಸಾಹಿತ್ಯ ಅಕ್ಕನಾಗಮ್ಮಂಗಾಯಿತ್ತು ; ರುದ್ರಾಕ್ಷಿಸಾಹಿತ್ಯ ಸರ್ವಪ್ರಮಥರಿಗಾಯಿತ್ತು. ಮಂತ್ರಸಾಹಿತ್ಯದವರ ಕಂಡಡೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯನಿವರೆ ಎಂದು ಎನ್ನ ಮನ ನಂಬಿತ್ತು ನೋಡ, ಮಡಿವಾಳ ಮಾಚಯ್ಯ.