•  
  •  
  •  
  •  
Index   ವಚನ - 1916    Search  
 
ಸರ್ವರು ಜ್ಞಾನದಿಂದಲ್ಲದೆ, ಗೋತ್ರಾಭಿಮಾನದಿಂದ ಮೋಕ್ಷವಂತರಲ್ಲ ಕೇಳಾ. ``ತಪಸಾ ಬ್ರಾಹ್ಮಣೋ ಜಾತೋ ವಿಶ್ವಾಮಿತ್ರೋ ಮಹಾಮುನಿಃ| ತಪಸಾ ಬ್ರಾಹ್ಮಣೋ ಜಾತೋ ನಾರದೋ ಹಿ ಮಹಾಮುನಿಃ|| ತಪಸಾ ಬ್ರಾಹ್ಮಣೋ ಜಾತಿಶ್ಚಾಗಸ್ತ್ಯೋ ಮುನಿಪುಂಗವಃ| ತಪಸಾ ಬ್ರಾಹ್ಮಣೋ ಜಾತಃ ಪರಾಶರಮಹಾಮುನಿಃ|| ತಪಸಾ ಬ್ರಾಹ್ಮಣೋ ಜಾತೋ ದೂರ್ವಾಸಸ್ತು ಮಹಾಮುನಿಃ| ತಪಸಾ ಬ್ರಾಹ್ಮಣೋ ಜಾತೋ ಭೃಗುರ್ವ್ಯಾಸಶ್ಚ ಮಾಂಡವಃ||" ಎಂಬುದು ಹುಸಿಯಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Sarvara jñānadindallade, gōtrābhimānadinda mōkṣavantaralla kēḷā. ``Tapasā brāhmaṇō jātō viśvāmitrō mahāmuniḥ| tapasā brāhmaṇō jātō nāradō hi mahāmuniḥ|| tapasā brāhmaṇō jātiścāgastyō munipuṅgavaḥ| tapasā brāhmaṇō jātaḥ parāśaramahāmuniḥ|| tapasā brāhmaṇō jātō dūrvāsastu mahāmuniḥ| tapasā brāhmaṇō jātō bhr̥gurvyāsaśca māṇḍavaḥ|| embudu husiyalla nōḍā, kapilasid'dhamallikārjunā.