ತಾನು ಪ್ರಪಂಚಿಕನಾಗಿ ಪರಮಾರ್ಥವ
ಪಡೆಯಬೇಕೆಂಬಾಶೆಯುಳ್ಳಡೆ,
ಪರಧನ ಪರಸ್ತ್ರೀಯರ ವಿವರ್ಜಿಸಿ
ಪೂಜಿಸುವ ಪರಶಿವನ.
ತಾನು ಪ್ರಪಂಚಿಯಾಗಿ ಕೀರ್ತಿಯ
ಪಡೆಯಬೇಕೆಂಬಾಶೆಯುಳ್ಳಡೆ,
ಜೀವದಯಾಪರತ್ವ, ಮೃಷಾಭಾಷಾನಿರಾಕರಣತ್ವ,
ಯಾಚಕರೊಳ್ಧಾತೃತ್ವವ ಮಾಡಿ
[ಪೂಜಿಸುವ] ನೋಡಾ ಪರಶಿವನ.
ಇದೆ ಅಂತರಂಗದ ವಿಚಾರ,
ಇದೆ ಬಹಿರಂಗದಲ್ಲಿ ಭೂಷಣ.
ಇದೆ ಕಪಿಲಸಿದ್ಧಮಲ್ಲಿಕಾರ್ಜುನನೆಂಬ
ಮಹಾಬೊಮ್ಮ ತಾನು,
ಕಂಡೆಯಾ ಬೊಮ್ಮಯ್ಯಾ.
Art
Manuscript
Music
Courtesy:
Transliteration
Tānu prapan̄cikanāgi paramārthava
paḍeyabēkembāśeyuḷḷaḍe,
paradhana parastrīyara vivarjisi
pūjisuva paraśivana.
Tānu prapan̄ciyāgi kīrtiya
paḍeyabēkembāśeyuḷḷaḍe,
jīvadayāparatva, mr̥ṣābhāṣānirākaraṇatva,
yācakaroḷdhātr̥tvava māḍi
[pūjisuva] nōḍā paraśivana.
Ide antaraṅgada vicāra,
ide bahiraṅgadalli bhūṣaṇa.
Ide kapilasid'dhamallikārjunanemba
mahābom'ma tānu,
kaṇḍeyā bom'mayya.
ಸ್ಥಲ -
ಶರಣನ ವಾಗ್ರಚನಪ್ರತಾಪಸ್ಥಲ