Index   ವಚನ - 1941    Search  
 
ಸ್ವರ್ಗವೆಂದಡೆ ಸುಖಕ್ಕೆ ನಾಮ, ನರಕವೆಂದಡೆ ಬಾಧೆಗೆ ನಾಮ. ಸುಖವೆಂದಡೆ ಪುಣ್ಯ ನೋವೆಂದಡೆ ದುಃಖ. ಸುಖವಿಯೋಗವಾದಲ್ಲಿ ದುಃಖವೆನಿಸಿತ್ತು, ದುಃಖವಿಯೋಗವಾದಲ್ಲಿ ಸುಖವೆನಿಸಿತ್ತು. ಸುಖಾಸುಖವೆಂದರಿಯಬಾರದು, ಮೊದಲ ಹಿಡಿದ ಸಂಗತಿಯಿಂದ; ಸುಖಸಂಗದಿಂದ ದುಃಖ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.