ವಚನ - 1942     
 
ಸುಖಕ್ಕೆ ದೈವವೆಂದು, ಸುಖಕ್ಕೆ ವಿಧಿಲಿಪಿಯೆಂದು, ಸುಖಕ್ಕೆ ಪುಣ್ಯವೆಂದು, ಸುಖಕ್ಕೆ ಪ್ರಾರಬ್ಧವೆಂದು, ನುಡಿವರಯ್ಯಾ ಸಿದ್ಧಾಂತಿಗಳು. ಸುಖವೆ ದೈವವೆನಲಾಗಿ ಮಾಡುವ ಕ್ರಿಯೆಯಲ್ಲರಿಯಬಂದಿತ್ತು. ಸುಖವು ದೈವವಲ್ಲ; ದೈವವದು ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಕೂಡುವ ಕೂಟವು.