Index   ವಚನ - 1    Search  
 
ಬಸವಣ್ಣ ಚೆನ್ನಬಸವಣ್ಣ ಪ್ರಭುಸ್ವಾಮಿ ಮಡಿವಾಳ ಮಾಚಯ್ಯ ಹಡಪದಪ್ಪಣ್ಣ ಅಕ್ಕಮಹಾದೇವಿ ನೀಲಲೋಚನೆಯಮ್ಮ ಗಂಗಾಂಬಿಕೆ ಅಕ್ಕನಾಗಲೆ ಮುಕ್ತಾಯಕ್ಕ ನಿಂಬೆಕ್ಕ ಚೋಳವ್ವೆ ಅಮ್ಮವ್ವೆ ಆದವ್ವೆ ಕೋಳೂರು ಕೊಡಗೂಸಮ್ಮ ಗೊಗ್ಗವ್ವೆ ದುಗ್ಗಳವ್ವೆ ಸುಗ್ಗಳವ್ವೆಯರ ಪಾದರಕ್ಷೆಯೊಳಗೆ ಐಕ್ಯಪದವೀಯಯ್ಯ ಸಿದ್ಧಲಿಂಗಪ್ರಿಯ ಬಸವಪ್ರಭುವೆ ನಿಮ್ಮ ಧರ್ಮ ನಿಮ್ಮ ಧರ್ಮ ಈ ದೇವರ ಸೆರಗೊಡ್ಡಿ ಬೇಡಿಕೊಂಬೆನು. ಪಾಲಿಸಯ್ಯಾ ಸ್ವಾಮಿ ದಯದಿಂದ ಚಿದಾದಿತ್ಯ ನಿರೀಕ್ಷಣ ವಿಚಕ್ಷಣ. ವಸ್ತುವ ಕಂಡರೆ ಸುಮ್ಮನಿರುವುದುಚಿತವಯ್ಯಾ. ಅಂತಲ್ಲದೆ ಹೆಮ್ಮೆಗೆ ನುಡಿದಡೆ ಉಚಿತವಲ್ಲವಯ್ಯಾ ನೀನಾನೆಂಬುಭಯವಳಿದಾತಂಗೆ ಏನೂ ಇಲ್ಲವಯ್ಯಾ ವಿರಕ್ತರೆಂಬವರು ಸ್ತುತಿ ನಿಂದ್ಯಾದಿಗಳಿಗೆ ಹೆದರಿರಬೇಕಯ್ಯ, ಸಿದ್ಧಲಿಂಗಪ್ರಿಯ ಪ್ರಭುವೆ.