ಕಟ್ಟಿಗೆ ಕಸ ನೀರು ತಂದು,
ಸತ್ಯರ ಮನೆಯಲ್ಲಿ ಒಕ್ಕುದನೀಸಿಕೊಂಡು,
ತನ್ನ ಕೃತ್ಯ ತಪ್ಪದೆ ಒಕ್ಕುದಕೊಂಡು,
ಸತ್ಯನಾಗಿಪ್ಪ ಭಕ್ತನಂಗವೆ ಅದು ಅಮರೇಶ್ವರಲಿಂಗದ ಸಂಗ.
Art
Manuscript
Music
Courtesy:
Transliteration
Kaṭṭige kasa nīru tandu,
satyara maneyalli okkudanīsikoṇḍu,
tanna kr̥tya tappade okkudakoṇḍu,
satyanāgippa bhaktanaṅgave adu amarēśvaraliṅgada saṅga.