Index   ವಚನ - 26    Search  
 
ಶಿವನೆ ಶಿವಭಕ್ತನಾಗಿ ಬಂದ ಲೋಕಹಿತಾರ್ಥ. ಶಿವನೆ ಶಿವರಹಸ್ಯವ ಬೋಧಿಸಲೆಂದು ಗುರುವಾಗಿ ಬಂದು, ಲಿಂಗದ ಕಳೆಯನರುಹಿದ ಲೋಕಹಿತಾರ್ಥ. ಶಿವನೆ ಚರವೇಷದಲ್ಲಿ ಬಂದು, ಅಂಗ ಮೊದಲು, ಮನವೆ ಕಡೆಯಾದ ಪದಾರ್ಥ ದಾಸೋಹದಲ್ಲಿ ಸವೆಯಲೆಂದು ಬಂದ ಲೋಕಹಿತಾರ್ಥ. ಶಿವನೆ ಮಂತ್ರತಂತ್ರಯಂತ್ರೋಪಕರಣವಾಗಿ ಬಂದ ಲೋಕಹಿತಾರ್ಥ. ಇದರಂಗಸಂಗವ ಲಿಂಗಸಂಗಿಗಳು ಬಲ್ಲರು, ಅನಂಗಸಂಗಿಗಳೆತ್ತ ಬಲ್ಲರಯ್ಯಾ, ಅಮರೇಶ್ವರಲಿಂಗದನುವನರಿದ ಸಂಗನಬಸವಣ್ಣಾ?