ಅಡಿಗಡಿಗೆಲ್ಲಾ ಮಡಿಯ ಹಾಸೆಂಬರು,
ನಡೆನಡೆಗೆಲ್ಲಾ ದೇವಾದೇವಾ ಎಂಬರು,
ನುಡಿನುಡಿಗೆಲ್ಲಾ ಜೀಯಾಜೀಯಾ ಎಂಬರು,
ಎನ್ನೊಡೆಯ ಸೊಡ್ಡಳದೇವರದೇವನ
ಮುಡಿಗೊಂದರಳನೇರಿಸಿದವರಾ.
Art
Manuscript
Music
Courtesy:
Transliteration
Aḍigaḍigellā maḍiya hāsembaru,
naḍenaḍegellā dēvādēvā embaru,
nuḍinuḍigellā jīyājīyā embaru,
ennoḍeya soḍḍaḷadēvaradēvana
muḍigondaraḷanērisidavarā.