ಆದಿಯನಾದಿ ಆಚಾರವ ಕಾಣದೆ,
ಸಮಮಾನದ ಲಿಂಗದ ಘನವ ತಿಳಿಯದೆ,
ದಾಸಿಯ ಸಂಗಂಗೆಯ್ವ ಜಂಗಮಾಚಾರ್ಯಜ್ಞಾನಪುರುಷರು ಚಿತ್ತೈಸಿ,
ಶೈವಾರಾಧನೆಯ ಸ್ಥಲದಂತೆ ನಡೆದು, ಗಳಹಿಕೊಂಡು ಇಪ್ಪಿರಿ.
ಅಂಗದನಿತ ದಾಸೆಗೆ, ಪಂತಿಯ ಗಡಣದ ಹಸುವಿನಾಸೆಗೆ,
ಕಾಂಚಾಣದ ಪಂತಿಯಾಸೆಗೆ, ಸ್ಥಲ ಜಂಗಮಸ್ಥಲವಾಸಿಯ ಗಡಣದಾಸೆಗೆ,
ಪಂತಿ ಪಾದಾರ್ಚನೆಯ ಹಿರಿಯತನದ ಗಡಣ ಗಮಕದಾಸೆಗೆ,
ಕೃತಿಯ ದ್ವೈತವ ನಟಿಸುವ ಪಂಚಮಹಾಪಾತಕದೇವರ
ದೇವತ್ವದ ಬಲ್ಲರು ಕೇಳಿರಣ್ಣ.
ನಾ ದೇವತಾದೇವನೆಂಬುದೊಂದು ಸಮದೇವತ್ವದ ಗಳಹುವಿರಿ.
ಅಂಗದಲ್ಲಿ ಸೋವಿ ಮಾತ್ರವೆಂಬ ಸ್ತ್ರೀಯ ಆಲಿಂಗನಂಗೈದು ಗಳಹುವಿರಿ.
ಶ್ರುತಿಃ ಅರ್ಧವಣಿ ಕಥಃ ಸೋವಿ ವಚಃ ಬಾದಿನಿ ಪರ್ವಣಃ |
ಪಾಪಿಷ್ಟಾ ದುಷ್ಟದ್ರೋಹಿ ಚಾ ಪಾಪಿಷ್ಟ ಗುರುದ್ರೋಹಿ ಚಾ |
ಗುರುಶಿವಚ್ಚೇದನ ತತ್ ಗುರುಷಾಮಾ ಚಿ ಅಪಹಿನ್ |
ಗುರುಬಂಧನ ಗ್ರಾಹಿ ಚಃ | ಇಂತೆಂದುದಾಗಿ,
ಸೋವಿಮಾತ್ರವೆಂದು ವಾಗದ್ವೈತವನುಂಟುಮಾಡಿ ಕಂಡು,
ತಮ್ಮ ಸ್ವಯ ಇಚ್ಛೆಯ ಭಾವಕ್ಕೆ ಗಳಹಿಕೊಂಡು,
ಹಿರಿಯರ ಮರೆಯಲ್ಲಿ ಕುಳಿತು, ಒಡಲ ಹೊರೆವ ಶೂಕರನಂತೆ,
ತುಡುಗುಣಿತನಕ್ಕೆ ಗಡಣಿಸಿಕೊಂಡು ಹಿರಿಯರೆಂಬಿರಿ.
ಶಿವಾಚಾರಃ ಗಿರಿಜಾನಾಥಂಗೆ ಗೌರಿ ತ್ರಿವಿಧ ವಿಧಮೇಕಾರ್ಥಕಲ್ಯಾಣ,
ಗಿರಿಜಾಧಾರಿಯಲ್ಲಿ ಶಿವನ ದೇವತ್ವ ಕೆಟ್ಟಿತ್ತೆ ಪಾತಕರಿರಾ?
ಸೋವಿಯ ಆಲಿಂಗನಂಗೈದು, ಚುಂಬನ ಕರ ಉರ ಜಘನ
ಯೋನಿಚಕ್ರವ ಕೂಡಿ ನೆರೆದ ಬಳಿಕ,
ಪ್ರಾತಃಕಾಲದಲ್ಲಿ ಹನ್ನೆರಡು ಜಂಗಮದೇವರಿಗೆ
ಹನ್ನೆರಡು ಸುವರ್ಣಗಾಣಿಕೆಯನಿಕ್ಕಿ,
ಹನ್ನೆರಡು ದ್ವಿವಸ್ತ್ರ, ಹನ್ನೆರಡು ತೆಂಗಿನಕಾಯಿಂದ
ಹನ್ನೆರಡು ಜಂಗಮದೇವರಿಗೆ ಈ ಪರಿಯಾರ್ಥ ಅರ್ಚನೆಯ ಮಾಡಿದರೆ,
ನವಭೋಗದೊಳಗಣ ತ್ರಿವಿಧ ಭಾಗೆಯ ಕಲೆಯಿರಣ್ಣ.
ಅರಿದು ಮಾಡಿ ಮರದಂತೆ, ಬೆಬ್ಬನೆ ಬೆರೆತುಕೊಂಡಿರುವಾತ ಹಿರಿಯನಲ್ಲ.
ಆತ ಗುರುವಲ್ಲ ಲಿಂಗವಲ್ಲ ಜಂಗಮವಲ್ಲ
ಪಾದೋದಕ ಪ್ರಸಾದದೊಳಗಲ್ಲ.
ಅವ ಅಮೇಧ್ಯ ಸುರ ಭುಂಜಕನು.
ಇಂತೆಂಬ ಶ್ರುತಿಯ ಮೀರಿ ಆಚರಿಸುವ, ಬ್ರಹ್ಮರಾಕ್ಷಸ.
ನವಕೋಟಿ ಯೋನಿಚಕ್ರದಲ್ಲಿ ರಾಟಾಳದ ಘಟದಂತೆ ತಿರುಗುವನು.
ಆದಿಯ ವಚನದ ಸಮ್ಮತವಿದು,
ಸೋವಿಯ ಸಂಗ ಆಲಿಂಗನಂಗೈವಿರಿ.
ಸೋವಿಯ ಸಂಗ ಆಲಿಂಗನಂಗೈದವ,
ಶತಕೋಟಿ ಶೂಕರಯೋನಿಯಲ್ಲಿ ಬಪ್ಪನು.
ನವಕೋಟಿ ಗಾರ್ಧಭಯೋನಿಯಲ್ಲಿ ಬಪ್ಪನು.
ಶತಕೋಟಿ ಕುಕ್ಕುಟಯೋನಿಯಲ್ಲಿ ಬಪ್ಪನು.
ಸಚರಾಚರಯೋನಿ ಯೋನಿನವಕೋಟಿ ತಪ್ಪದು.
ಅವಂಗೆ ಜನ್ಮ ಜನ್ಮಾಂತರದಲ್ಲಿ ಬಪ್ಪುದು ತಪ್ಪದು.
ಇಂತಿದನರಿದು ಮರೆದೆಡೆ, ದೇವ ಮತ್ರ್ಯ ತಪರ್ಲೋಕಕ್ಕೆ ಸಲ್ಲಸಲ್ಲ,
ಅಲ್ಲ ನಿಲ್ಲು, ಮಾಣು, ಹೊರಗಯ್ಯ.
ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಹೊಯ್ಯೋ ಡಂಗುರವ,
ದೇವರಾಯ ಸೊಡ್ಡಳಾ.
Art
Manuscript
Music
Courtesy:
Transliteration
Ādiyanādi ācārava kāṇade,
samamānada liṅgada ghanava tiḷiyade,
dāsiya saṅgaṅgeyva jaṅgamācāryajñānapuruṣaru cittaisi,
śaivārādhaneya sthaladante naḍedu, gaḷahikoṇḍu ippiri.
Aṅgadanita dāsege, pantiya gaḍaṇada hasuvināsege,
kān̄cāṇada pantiyāsege, sthala jaṅgamasthalavāsiya gaḍaṇadāsege,
panti pādārcaneya hiriyatanada gaḍaṇa gamakadāsege,
kr̥tiya dvaitava naṭisuva pan̄camahāpātakadēvara
dēvatvada ballaru kēḷiraṇṇa.
Nā dēvatādēvanembudondu samadēvatvada gaḷahuviri.
Aṅgadalli sōvi mātravemba strīya āliṅganaṅgaidu gaḷahuviri.
Śrutiḥ ardhavaṇi kathaḥ sōvi vacaḥ bādini parvaṇaḥ |
pāpiṣṭā duṣṭadrōhi cā pāpiṣṭa gurudrōhi cā |
guruśivaccēdana tat guruṣāmā ci apahin |
gurubandhana grāhi caḥ | intendudāgi,
sōvimātravendu vāgadvaitavanuṇṭumāḍi kaṇḍu,
tam'ma svaya iccheya bhāvakke gaḷahikoṇḍu,
hiriyara mareyalli kuḷitu, oḍala horeva śūkaranante,
tuḍuguṇitanakke gaḍaṇisikoṇḍu hiriyarembiri.
Śivācāraḥ girijānāthaṅge gauri trividha vidhamēkārthakalyāṇa,
Girijādhāriyalli śivana dēvatva keṭṭitte pātakarirā?
Sōviya āliṅganaṅgaidu, cumbana kara ura jaghana
yōnicakrava kūḍi nereda baḷika,
prātaḥkāladalli hanneraḍu jaṅgamadēvarige
hanneraḍu suvarṇagāṇikeyanikki,
hanneraḍu dvivastra, hanneraḍu teṅginakāyinda
hanneraḍu jaṅgamadēvarige ī pariyārtha arcaneya māḍidare,
navabhōgadoḷagaṇa trividha bhāgeya kaleyiraṇṇa.
Aridu māḍi maradante, bebbane beretukoṇḍiruvāta hiriyanalla.
Āta guruvalla liṅgavalla jaṅgamavalla
pādōdaka prasādadoḷagalla.
Ava amēdhya sura bhun̄jakanu.
Intemba śrutiya mīri ācarisuva, brahmarākṣasa.
Navakōṭi yōnicakradalli rāṭāḷada ghaṭadante tiruguvanu.
Ādiya vacanada sam'matavidu,
sōviya saṅga āliṅganaṅgaiviri.
Sōviya saṅga āliṅganaṅgaidava,
śatakōṭi śūkarayōniyalli bappanu.
Navakōṭi gārdhabhayōniyalli bappanu.
Śatakōṭi kukkuṭayōniyalli bappanu.
Sacarācarayōni yōninavakōṭi tappadu.
Avaṅge janma janmāntaradalli bappudu tappadu.
Intidanaridu maredeḍe, dēva matrya taparlōkakke sallasalla,
alla nillu, māṇu, horagayya.
Nim'māṇe, nim'ma pramatharāṇe, hoyyō ḍaṅgurava,
dēvarāya soḍḍaḷā.