Index   ವಚನ - 11    Search  
 
ಈ ಪತ್ರೆಗೀ ಫಲ, ಈ ಪುಷ್ಪಕೀ ಫಲ, ಈ ಪೂಜೆಗೀ ಫಲವೆಂಬ ಕೈಕೂಲಿಕಾರರೆಲ್ಲ ಕರ್ಮಿಗಳಯ್ಯಾ, ಸ್ವರ್ಗನರಕಗಳನುಂಬ ಕರ್ಮಿಗಳಯ್ಯಾ. ಒಡಲೊಡವೆ ಪಡೆದರ್ಥವ ಮೃಡದೇವ ಸೊಡ್ಡಳಂಗರ್ಪಿತವೆಂದಾತ ಬೆಡಗಿನ ಶಿವಪುತ್ರ, ಉಳಿದವರಂತಿರಲಿ.