Index   ವಚನ - 15    Search  
 
ಎನ್ನ ಕಾಯವೆಂಬ ಸಿಂಹಾಸನದಲ್ಲಿ, ಪ್ರಾಣವೆಂಬ ಲಿಂಗವ ಮೂರ್ತಿಗೊಳಿಸಿ, ಧ್ಯಾನವೆಂಬ ಹಸ್ತದಲ್ಲಿ ಮುಟ್ಟಿ ಪೂಜಿಸುತ್ತಿರಲು, ಮೆಲ್ಲಮೆಲ್ಲನೆ ಸುತ್ತಿ ಮುತ್ತಿದ ಸಂಸಾರ ಬಯಲ ಬೆರಸಿ, ನಾ ನೀನೆಂಬ ಭೇದವಳಿದು, ಮಹಾದಾನಿ ಸೊಡ್ಡಳನಲ್ಲಿ ನಿಜೈಕ್ಯವಾಯಿತ್ತು.