ಒಂದು ಇಂದ್ರಿಯ ಮೊದಲಾದುದಕ್ಕೆ ಕಡೆಯಿಲ್ಲ.
ಕುಂಜರನು ಸ್ಪರ್ಶೇಂದ್ರಿಯದ ಬಳಿ ಸಂದು,
ಘಣಿರಾಗರಸದಿಂದ, ಭ್ರಮರ ಸೌರಭ್ಯದಿಂದ
ಮತ್ಸ್ಯರುಚಿಯಿಂದ, ಪತಂಗ ರೂಪಿಂದ,
ಒಂದೊಂದು ವಿಷಯದಲ್ಲಿ, ಒಂದೊಂದು ಪ್ರಾಣಿಗಳು ನೊಂದು,
ಬಂಧನಕ್ಕೆ ಬಂದುದನರಿಯಾ.
ಪಂಚೇಂದ್ರಿಯದ ಬೆಂಬಳಿಯಲ್ಲಿ ಹರಿವ ಮನುಜರ
ಕೊಂದುಕೂಗದೆ ಮಾಯೆ, ದೇವರಾಯ ಸೊಡ್ಡಳ ನೋಡೆ.
Art
Manuscript
Music
Courtesy:
Transliteration
Ondu indriya modalādudakke kaḍeyilla.
Kun̄jaranu sparśēndriyada baḷi sandu,
ghaṇirāgarasadinda, bhramara saurabhyadinda
matsyaruciyinda, pataṅga rūpinda,
ondondu viṣayadalli, ondondu prāṇigaḷu nondu,
bandhanakke bandudanariyā.
Pan̄cēndriyada bembaḷiyalli hariva manujara
kondukūgade māye, dēvarāya soḍḍaḷa nōḍe.