Index   ವಚನ - 63    Search  
 
ಬಳಿನೀರಿಂಗೆ ಲಿಂಗವನರಸುತ್ತ ಹೋಹಲ್ಲಿ ಅಲ್ಲಿ ನಿಮ್ಮ ಸಮಯ ತಪ್ಪಿತ್ತು ಭೋ. ಶೋಭನಕ್ಕೆ ನಂದಿಮುಖವೆಂಬಿರಿ, ಅಲ್ಲಿ ನಿಮ್ಮ ಸಮಯ ತಪ್ಪಿತ್ತು ಭೋ. ಸತ್ತಲ್ಲಿ ರುದ್ರಭೂಮಿಗೊಯ್ಯೆಂಬಿರಿ, ಅಲ್ಲಿ ನಿಮ್ಮ ಸಮಯ ತಪ್ಪಿತ್ತು ಭೋ. ಮತ್ತೊಂದು ದೇಸಿಂಗೆ ರುದ್ರನ ಹೊಂಗಳೆಂದು ಇಕ್ಕುವರು, ಅಲ್ಲಿ ನಿಮ್ಮ ಸಮಯ ತಪ್ಪಿತ್ತು ಭೋ. ಮತ್ತೊಂದು ದಿನದಲ್ಲಿ ವೃಷಭನ ವಿಡಿಯೆಂಬಿರಿ, ಅಲ್ಲಿ ನಿಮ್ಮ ಸಮಯ ತಪ್ಪಿತ್ತು ಭೋ. ಅದೆಂತೆಂದಡೆ: ದೇವಕಾರ್ಯೇ ವಿವಾಹೇ ಚ ಸ್ವಗುರುತ್ವಂ ವಿವರ್ಜಯೇತ್ | ತ್ರಯೋ ದೇವಾ ಸಮಂ ದೃಷ್ಟಾಃ ಶುನಿಗರ್ಭೇಷು ಜಾಯತೇ || ಎಂದುದಾಗಿ, ಬೇರೆ ದೇವರ, ಬೇರೆ ಸಮಯವ ತೂರಿದಡೆ ಕಾಣೆ, ಕೇರಿದಡೆ ಕಾಣೆ. ಭೂಮಿಯೆ ಪೀಠಿಕೆ, ಆಕಾಶವೆ ಲಿಂಗ. ಇದರೊಳಗಲ್ಲದೆ ಹೊರಗೆ ಮತ್ತುಂಟೆ? ಸರ್ವಜ್ಞದೇವರ ಗರ್ಭದೊಳಗಿದು, ಉಬ್ಬಿಕೊಬ್ಬಿ ನುಡಿವರ [ಕಂಡು] ನಗುವ ಭೋ ಸೊಡ್ಡಳನು.