Index   ವಚನ - 68    Search  
 
ಬ್ರಹ್ಮಪದವಿಯನೊಲ್ಲೆ, ವಿಷ್ಣುಪದವಿಯನೊಲ್ಲೆ, ರುದ್ರಪದವಿಯನೊಲ್ಲ, ಇಂದ್ರಪದವಿಯನೊಲ್ಲೆ, ಉಳಿದ ದೇವತೆಗಳ ಪದವಿಯನೊಲ್ಲೆ. ಎಲ್ಲಕ್ಕೂ ಒಡೆಯನಾದ ಶಿವನ ಪ್ರಮಥಗಣಂಗಳ ತಿಪ್ಪೆಯ ಮೇಲಣ ಹುಳುವಾಗಿ ಹುಟ್ಟುವ ಪದವಿಯ ಕರುಣಿಸು, ಮಹಾಮಹಿಮ ಸೊಡ್ಡಳಾ.