ಲಿಂಗವ ಹರಿ ಪ್ರತಿಷ್ಠೆಯ ಮಾಡಿದ ಮತ್ಸ್ಯಾವತಾರದಲ್ಲಿ,
ಮತ್ಸ್ಯಕೇಶ್ವರದೇವರ ತಿಂಬಾ ದ್ವೀಪದಲ್ಲಿ.
ಲಿಂಗವ ಪ್ರತಿಷ್ಠಯ ಮಾಡಿದ ಕೂರ್ಮಾವತಾರದಲ್ಲಿ,
ಕೂರ್ಮೇಶ್ವರದೇವರ ದ್ವಾರವತಿಯಲ್ಲಿ.
ಲಿಂಗವ ಪ್ರತಿಷ್ಠೆಯ ಮಾಡಿದ ವರಾಹಾವತಾರದಲ್ಲಿ,
ವರಾಹಕೇಶ್ವರದೇವರ ವೃಂದಗಿರಿಯಲ್ಲಿ.
ಲಿಂಗವಹರಿಪ್ರತಿಷ್ಠೆಯ ಮಾಡಿದ ನಾರಸಿಂಹಾವತಾರದಲ್ಲಿ,
ನರಸಿಂಹೇಶ್ವರದೇವರ ಓಬಳದಲ್ಲಿ.
ಲಿಂಗವ ಹರಿಪ್ರತಿಷ್ಠೆಯ ಮಾಡಿದ ವಾಮನಾವತಾರದಲ್ಲಿ,
ವಾಮೇಶ್ವರದೇವರ ವಾರಾಣಸಿಯಲ್ಲಿ.
ಲಿಂಗವ ಹರಿಪ್ರತಿಷ್ಠೆಯ ಮಾಡಿದ ಬೌದ್ಧಾವತಾರದಲ್ಲಿ,
ಬೌದ್ದಕೇಶ್ವರದೇವರ ಕಾಸಿಯಲ್ಲಿ.
ಲಿಂಗವ ಹರಿಪ್ರತಿಷ್ಠೆಯ ಮಾಡಿದ ರಾಮಾವತಾರದಲ್ಲಿ
ರಾಮೇಶ್ವರದೇವರ ಸೇತುವಿನಲ್ಲಿ.
ಲಿಂಗವ ಹರಿಪ್ರತಿಷ್ಟೆಯ ಮಾಡಿದ ಪರಶುರಾಮಾವತಾರದಲ್ಲಿ,
ಪರಶುರಾಮೇಶ್ವರ ದೇವರ ಕಪ್ಪಿನಿಯ ತೀರದಲ್ಲಿ,
ಲಿಂಗವ ಹರಿ ಪ್ರತಿಷ್ಠೆಯ ಮಾಡಿದ ಕೃಷ್ಣಾವತಾರದಲ್ಲಿ,
ಕೃಷ್ಣೇಶ್ವರದೇವರ ಹಿಮವತ್ಪರ್ವತದಲ್ಲಿ.
ಲಿಂಗಕ್ಕೆ ಹರಿಯೆ ಭಕ್ಕನಾದ ನೋಡಿರೆ,
ಕಲಿಯುಗದಲ್ಲಿ ಸ್ತ್ರೀ ರೂಪಿನಿಂದ ಅಗಲಕ್ಕೆ ನಿಂದು,
ಇಂತೀ ದಶಾವತಾರದಲ್ಲಿಯು ಹರಿಯೆ ಭಕ್ಕ,
ಹರಿಯ ಬಿಟ್ಟು ಭಕ್ತರಿಲ್ಲ,
ನಮ್ಮ ಸೊಡ್ಡಳದೇವರ ಬಿಟ್ಟು ಕರ್ತರಿಲ್ಲ ಕೇಳಿರಣ್ಣ.
Art
Manuscript
Music
Courtesy:
Transliteration
Liṅgava hari pratiṣṭheya māḍida matsyāvatāradalli,
matsyakēśvaradēvara timbā dvīpadalli.
Liṅgava pratiṣṭhaya māḍida kūrmāvatāradalli,
kūrmēśvaradēvara dvāravatiyalli.
Liṅgava pratiṣṭheya māḍida varāhāvatāradalli,
varāhakēśvaradēvara vr̥ndagiriyalli.
Liṅgavaharipratiṣṭheya māḍida nārasinhāvatāradalli,
narasinhēśvaradēvara ōbaḷadalli.
Liṅgava haripratiṣṭheya māḍida vāmanāvatāradalli,
vāmēśvaradēvara vārāṇasiyalli.
Liṅgava haripratiṣṭheya māḍida baud'dhāvatāradalli,
Bauddakēśvaradēvara kāsiyalli.
Liṅgava haripratiṣṭheya māḍida rāmāvatāradalli
rāmēśvaradēvara sētuvinalli.
Liṅgava haripratiṣṭeya māḍida paraśurāmāvatāradalli,
paraśurāmēśvara dēvara kappiniya tīradalli,
liṅgava hari pratiṣṭheya māḍida kr̥ṣṇāvatāradalli,
kr̥ṣṇēśvaradēvara himavatparvatadalli.
Liṅgakke hariye bhakkanāda nōḍire,
kaliyugadalli strī rūpininda agalakke nindu,
intī daśāvatāradalliyu hariye bhakka,
hariya biṭṭu bhaktarilla,
nam'ma soḍḍaḷadēvara biṭṭu kartarilla kēḷiraṇṇa.