Index   ವಚನ - 87    Search  
 
ಶರೀರವೆಂಬ ಹಸಿಯ ಮಣ್ಣು, ಅದು ಹಿರಿಯತನಕ್ಕಿಕ್ಕಿದ ದುರ್ಗಧೂಳಿ, ಗೊಂಟಿ ಪೋಪುದು ಮಾಣ್ಬುದೆ? ಜವನ ದಾಳಿ ಒಪ್ಪುದಯ್ಯಾ. ಹರನ ವಿಶ್ವಾಸ ತಪ್ಪಲೊಡನೆ, ನರನ ವಿಧಿಯ ನಾನೆಂಬೆ ಸೊಡ್ಡಳಾ.