ಶಿಖಿ ಬ್ರಾಹ್ಮಣ, ನಯನ ಕ್ಷತ್ರಿಯ,
ನಾಶಿಕ ಬಣಜಿಗ, ಅಧರ ಒಕ್ಕಲಿಗ,
ಕರ್ಣ ಗೊಲ್ಲ, ಕೊರಳು ಕುಂಬಾರ,
ಬಾಹು ಪಂಚಾಳ, ಅಂಗೈ ಉಪ್ಪಾರ,
ನಖ ನಾಯಿಂದ, ಒಡಲು ಡೊಂಬ,
ಬೆನ್ನು ಅಸಗ, ಚರ್ಮ ಬೇಡ,
ಪೃಷ್ಠಸ್ಥಾನ ಕಬ್ಬಿಲಿಗ, ಒಳದೊಡೆ ಹೊಲೆಯ,
ಮೊಣಕಾಲು ಈಳಿಗ, ಕಣಕಾಲು ಸಮಗಾರ,
ಮೇಗಾಲು ಮಚ್ಚಿಗ, ಚಲಪಾದವೆಂಬ
ಅಂಗಾಲು ಶುದ್ಧ ಮಾದಿಗ ಕಾಣಿರೊ!
ಇಂತೀ ಹದಿನೆಂಟುಜಾತಿ ತನ್ನಲಿ ಉಂಟು.
ಇವು ಇಲ್ಲಾಯೆಂದು ಜಾತಿಗೆ ಹೋರುವ ಅಜ್ಞಾನಿಗಳ
ನಮ್ಮ ಸೊಡ್ಡಳದೇವರು ಮೆಚ್ಚನಯ್ಯಾ.
Art
Manuscript
Music
Courtesy:
Transliteration
Śikhi brāhmaṇa, nayana kṣatriya,
nāśika baṇajiga, adhara okkaliga,
karṇa golla, koraḷu kumbāra,
bāhu pan̄cāḷa, aṅgai uppāra,
nakha nāyinda, oḍalu ḍomba,
bennu asaga, carma bēḍa,
pr̥ṣṭhasthāna kabbiliga, oḷadoḍe holeya,
moṇakālu īḷiga, kaṇakālu samagāra,
mēgālu macciga, calapādavemba
aṅgālu śud'dha mādiga kāṇiro!
Intī hadineṇṭujāti tannali uṇṭu.
Ivu illāyendu jātige hōruva ajñānigaḷa
nam'ma soḍḍaḷadēvaru meccanayyā.