Index   ವಚನ - 92    Search  
 
ಶ್ರುತಿತತಿಗಳ ಶಿರದ ಮೇಲೆ ಒಪ್ಪುತಿಪ್ಪ ಅತ್ಯತಿಷ್ಠದ್ದಶಾಂಗುಲನ ಕಂಡೆನಯ್ಯಾ. ಅಣುವಿಂಗೆ ಅಣು, ಮಹತ್ತಿಂಗೆ ಮಹತ್ತಾದ ತ್ರಿಣಯನ ಮೂರ್ತಿಯ ಕಂಡೆನಯ್ಯಾ. ವಾಙ್ಮನಕ್ಕಗೋಚರವಾದ ನಿರವಯ ಬ್ರಹ್ಮವ ಕಂಡೆನಯ್ಯಾ. ನಿತ್ಯನೇಕೋರುದ್ರನದ್ವಿತೀಯನ ಕಂಡೆನಯ್ಯಾ. ಎನ್ನ ಕರಸ್ಥಲದೊಳಗೆ ಮಹಾದಾನಿ ಸೊಡ್ಡಳನ ಕಂಡೆನಯ್ಯಾ.