ಹರನ ಡಿಂಗರಿಗ ದಧೀಚಿಯ ಶಾಪದಿಂದ
ಕರ ಬೇವಂತೆ ಬೆಂದರಾಗಳೆ ಹುರುಡಿಸುವರು.
ಇದುಕಾರಣ, ದಿಟದಿಟ ಗರುಡಧ್ವಜದೇವನೆಂದೆಂಬಿರಿ.
ಗರುಡವಾಹನನಲ್ಲದೆ ಬೇರೆರಡನೆಯ ದೇವರಿಲ್ಲೆಂದಡೆ,
ಹರಿದು ಕಳೆದರು ವ್ಯಾಸನ ತೋಳೆರಡ.
ನಂದಿ ಮಹಾಕಾಳರು ಬಂದು,
ಮನಸಿನ ಹೊಲಸುಗಳು ನಿಃಕರಡರರಿವರೆ ಶಿವನ ನಿಲುವನು?
ಹರನ ಹೋಲುವ ದೈವರೊಳರೆ,
ನಮ್ಮ ಪಂಚವದನ ಸೊಡ್ಡಳಂಗೆ?
Art
Manuscript
Music
Courtesy:
Transliteration
Harana ḍiṅgariga dadhīciya śāpadinda
kara bēvante bendarāgaḷe huruḍisuvaru.
Idukāraṇa, diṭadiṭa garuḍadhvajadēvanendembiri.
Garuḍavāhananallade bēreraḍaneya dēvarillendaḍe,
haridu kaḷedaru vyāsana tōḷeraḍa.
Nandi mahākāḷaru bandu,
manasina holasugaḷu niḥkaraḍararivare śivana niluvanu?
Harana hōluva daivaroḷare,
nam'ma pan̄cavadana soḍḍaḷaṅge?