Index   ವಚನ - 1    Search  
 
ಪದಾರ್ಥದೊಳಗೆ ಪ್ರಸಾದರೂಪುಂಟು. ಪ್ರಸಾದದೊಳಗೆ ಪದಾರ್ಥರೂಪುಂಟು. ಉಂಟು ಇಲ್ಲಾಯೆಂಬವರು ನೀವು ತಿಳಿದು ನೋಡಿರಯ್ಯಾ. ನಾವಿದನರಿಯೆವಯ್ಯಾ. ಸೋಮಭೀಮೇಶ್ವರಲಿಂಗವು ತಾವೇ ಬಲ್ಲರು.