ಚಿತ್ತೆಂಬಿತ್ತು ಬಲಿದು ಕಲೆಯಂಕುರಿಸಿದಲ್ಲಿ, ನಿಮಗೆ
ತ್ರಿವಿಧನಾಮ ಸೂಚನೆಯಾಯಿತ್ತು.
ನಿಮ್ಮ ನಾಮದ ಬೆಂಬಳಿಯಲ್ಲಿ ನಿಮ್ಮ ಶಕ್ತಿ.
ಇಚ್ಛಾ ಜ್ಞಾನ ಕ್ರಿಯಾಶಕ್ತಿ ರೂಪಾದ ನಾನಾಶಕ್ತಿ ಭೇದವಾಗಿ,
ಅಂದು ನಿಮಗೆ ಚಂದ್ರಧರಾದಿ ಸ್ಥಾಣು ಕಡೆಯಾದ
ನಾನಾ ಲೀಲೆಗಳಾದವು.
ಆ ನಿಮ್ಮಿಬ್ಬರಿಂದ ರುದ್ರಾವತಾರಗಳಾದವು.
ನಿಮ್ಮ ಬೆರಗಿನ ಲೀಲೆಯ ಬಲ್ಲವರಾರಯ್ಯ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ?