Index   ವಚನ - 10    Search  
 
ಪಿಂಡ ಪಿಂಡವೆಂದೇನು? ತನು ಪಿಂಡವೆ? ಮನ ಪಿಂಡವೆ? ವಾಯು ಪಿಂಡವೆ? ಅಲ್ಲ: ಆದಿ ಪಿಂಡವಿಡಿದು ಬಂದ ಜ್ಞಾನಪಿಂಡವೆ ಪಿಂಡ. ಅದನರಿಯಲಿಲ್ಲ. ಅದು ಕ್ಷೀರದೊಳಗಣ ಆಜ್ಯದಂತೆ. ಪಾಷಾಣದೊಳಗಣ ಪಾವಕದಂತೆ ಅಡಗಿರ್ಪುದಾಗಿ. ಅಂತಪ್ಪ ನಿರ್ಮಲ ಪಿಂಡ ನಿಮ್ಮ ಶರಣಂಗಾಯಿತ್ತು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.