Index   ವಚನ - 19    Search  
 
ದೇಹವೆಂಬುದೊಂದು ನಡುಮನೆಗೆ, ಕಾಲುಗಳೆರಡು ಕಂಬ ಕಂಡಯ್ಯ. ಬೆನ್ನೆಲು ಬೆಮ್ಮರ ಎಲುಗಳು. ನರದ ಕಟ್ಟು ಚರ್ಮದ ಹೊದಕೆ. ಒಂದು ಮಠಕ್ಕೆ ಒಂಬತ್ತು ಬಾಗಿಲು. ಆ ದಾರಿಯಾಗೆ ಹೋಹ ಬಾಹರಿಗೆ ಲೆಕ್ಕವಿಲ್ಲ. ಒಡೆಯರಿಲ್ಲದ ಮನೆಯಂತೆ ಆವಾಗ ಕೆಡುವದೆಂದರಿಯಬಾರದು. ಬಿಡು ಮನೆಯಾಸೆಯ. ಬೇಗ ವಿರಕ್ತನಾಗು ಮರುಳೆ. ಪಡೆವೆ ಮುಂದೆ ಮುಕ್ತಿಯ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಒಂದಾಹ ಸೌಖ್ಯವನು.