Index   ವಚನ - 21    Search  
 
ಸಂಸಾರವೆಂಬ ವಿಷವೃಕ್ಷಕ್ಕೆ ಪಂಚೇಂದ್ರಿಯಂಗಳೇ ಶಾಖೆಗಳು. ಪಂಚಕ್ಲೇಶಂಗಳೆ ಫಲಂಗಳು, ಪಂಚವಿಷಯಂಗಳೇ ರಸವು. ಈ ಫಲವ ಬಯಸಿ, ಮೆದ್ದವರೆಲ್ಲಾ ಮರಣಕ್ಕೊಳಗಾದರು. ಅದನರಿದು ಆ ಫಲವ ನಾನು ಮುಟ್ಟೆನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.