Index   ವಚನ - 40    Search  
 
ಮನವಿದು ಕ್ಷಣದೊಳಗೆ ಹೋಗದ ಠಾವಿಗೆ ಹೋದಂತೆ ನೆನೆವುತ್ತಿದೆ. ಬಾರದ ಠಾವಿಂಗೆ ಬಂದಂತೆ ನೆನೆವುತ್ತಿದೆ. ಕಾಣದುದ ಕಂಡಂತೆ ನೆನೆವುತ್ತಿದೆ. ಕೇಳದುದ ಕೇಳಿದಂತೆ ನೆನೆವುತ್ತಿದೆ. ಕ್ಷಣದೊಳಗೆ ದಶದಿಕ್ಕಿಗೈಯುತ್ತಿದೆ. ಶತಮರ್ಕಟವಿಧಿ ಬಂದು ಮನಕ್ಕಾದರೆ ಇದನೆಂತು ತಾಳಬಹುದಯ್ಯ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ, ಈ ಮನವ ಸೆರೆಯಿಟ್ಟಾಳಯ್ಯಾ ನಿಮ್ಮ ಧರ್ಮ ಬೇಡಿಕೊಂಬೆ.