Index   ವಚನ - 69    Search  
 
ಗುರು ಶಿಷ್ಯ ಭಾವದಿಂದ, ಪ್ರಶ್ನೋತ್ತರವಾಗಿ ಕೇಳುವಾತ ಶಿಷ್ಯನು, ಜ್ಞಾನದ್ವಾರದಿಂದ ಹೇಳುವಾತ ಗುರು. ಪೂರ್ವಪಕ್ಷಭೇದದಿಂದ ಶರೀರಾದಿ ಸಮಸ್ತ ಲೋಕವನು ತೋರಿಸಿ, ಉತ್ತರಪಕ್ಷದರಿವಿನ ಭೇದದಿಂದ ಶರೀರಾದಿ ವಿಶ್ವರು ಲಿಂಗದಲ್ಲಿ ಲೀಯವಾದ ನಿಲವ ತೋರಿದ ಗುರು ಸರ್ವಾಚಾರಜ್ಞಾನಸಾರ ಪರಾಯಣ ಶಿವನು ಭೂತಸಂಯುಕ್ತನು. ಶಿಷ್ಯನ ಸಂಶಯವ ಛೇದಿಸಿ, ನಿಜವ ತೋರಿದ ಆ ಗುರುವಿನ ಶ್ರೀಪಾದಕ್ಕೆ, ನಮೋ ನಮೋ ಎಂಬೆನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.