Index   ವಚನ - 77    Search  
 
ನಿರಾಳದಿಂದ ಸಹಜವಾಯಿತ್ತು. ಸಹಜದಿಂದ ಸೃಷ್ಟಿಯಾಯಿತ್ತು. ಸೃಷ್ಟಿಯಿಂದ ಸಂಸಾರವಾಯಿತ್ತು. ಸಂಸಾರದಿಂದ ಅಜ್ಞಾನವಾಯಿತ್ತು. ಅಜ್ಞಾನದಿಂದ ಬಳಲುವ ಜೀವರ, ಬಳಲಿಕೆಯ ತೊಲಗಿಸಲು ಜ್ಞಾನವಾಯಿತ್ತು. ಜ್ಞಾನದಿಂದಲಾಯಿತ್ತು ಗುರುಕರುಣ. ಗುರುಕರುಣದಿಂದಲಾಯಿತ್ತು ಸುಮನ. ಸುಮನದಿಂದಲಾಯಿತ್ತು ಶಿವಧ್ಯಾನ. ಶಿವಧ್ಯಾನದಿಂದಲಾಯಿತ್ತು ನಿರ್ದೇಹ. ನಿರ್ದೇಹದಿಂದಲಾಯಿತ್ತು ಸಾಯುಜ್ಯ. ಸಾಯುಜ್ಯದಿಂದಲಾಯಿತ್ತು ಸರ್ವಶೂನ್ಯ. ಆ ಸರ್ವಶೂನ್ಯದಲ್ಲೊಡಗೂಡಿ ನಿಂದಾತಂಗೆ, ಮರಳಿ ಜನ್ಮ ಉಂಟೆ ಹೇಳಾ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.