Index   ವಚನ - 108    Search  
 
ನಿಚ್ಚ ನಿಚ್ಚ ಲಿಂಗಪೂಜೆಯ ಮಾಡಿ, ನಿಚ್ಚ ನಿಚ್ಚ ಜಂಗಮಕ್ಕೆ ಶರಣೆಂದು, ಜಂಗಮ ಪೂಜೆಯ ಮಾಡಿ, ನಿಚ್ಚ ನಿಚ್ಚ ಪಾದೋದಕ ಪ್ರಸಾದವ ಕೊಂಡು, ಮತ್ತೆ, ಆ ಜಂಗಮವ ಧಿಕ್ಕರಿಸಿ ನುಡಿದು, ಹುಸಿಯಟಮಟವನಾರೋಪಿಸಿ, ಜಂಗಮದ ಕೈಗೆ, ನಾಲಗೆಗೆ ಶಿಕ್ಷೆಯ ಮಾಡಬೇಕೆಂಬವರಿಗೆ ಗುರುವುಂಟೆ? ಲಿಂಗವುಂಟೆ? ಜಂಗಮವುಂಟೆ? ಪಾದೋದಕ ಪ್ರಸಾದವುಂಟೆ? ಇಲ್ಲವಾಗಿ. ಅವರಿಗೆ ಪೂಜಾಫಲ ಮುನ್ನವೆ ಇಲ್ಲವಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.