ಇಂದಿಗೆಂತು ನಾಳಿಂಗೆಂತೆಂದು, ಬೆಂದ ಒಡಲಿಗೆ ಚಿಂತಿಸಿ,
ಭ್ರಮೆಗೊಂಡು ಬಳಲಬೇಡ ಮರುಳೇ.
ಎಂಬತ್ತುನಾಲ್ಕು ಲಕ್ಷ ಯೋನಿಯೊಳಗಾದ ಸಮಸ್ತ ಜೀವರಿಗೆ,
ಭೋಗವನೂ, ಭೋಗ ವಿಷಯ ಜ್ಞಾನವನೂ, ಕೊಟ್ಟು ಸಲಹುವ
ದೇವನು, ತನ್ನ ಸಲಹಲಾರನೆ?
ಇದನರಿದು ಮತ್ತೇಕೆ ಚಿಂತಿಸುವೆ ಮರುಳೇ?
ಹುಟ್ಟಿಸಿದ ದೇವನು ರಕ್ಷಿಸುವನಲ್ಲದೆ ಮಾಣನೆಂಬುದನರಿಯ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು,
ಕರುಣಿ ಕೃಪಾಳುವೆಂಬುದನರಿಯ ಮರುಳೇ.
Art
Manuscript
Music
Courtesy:
Transliteration
Indigentu nāḷiṅgentendu, benda oḍalige cintisi,
bhramegoṇḍu baḷalabēḍa maruḷē.
Embattunālku lakṣa yōniyoḷagāda samasta jīvarige,
bhōgavanū, bhōga viṣaya jñānavanū, koṭṭu salahuva
dēvanu, tanna salahalārane?
Idanaridu mattēke cintisuve maruḷē?
Huṭṭisida dēvanu rakṣisuvanallade māṇanembudanariya?
Nijaguru svatantrasid'dhaliṅgēśvaranu,
karuṇi kr̥pāḷuvembudanariya maruḷē.