ಗುರುವೆನೆ ಲಿಂಗವೆಂದರಿದ ಕಾರಣ,
ಗುರುವ ಲಿಂಗದಲ್ಲಿ ಕಂಡೆ.
ಲಿಂಗವನೆ ಜಂಗಮವೆಂದರಿದ ಕಾರಣ
ಲಿಂಗವ ಜಂಗಮದಲ್ಲಿ ಕಂಡೆ.
ಜಂಗಮವನೆ ನಾನೆಂದರಿದ ಕಾರಣ,
ಜಂಗಮವ ನನ್ನಲ್ಲಿ ಕಂಡೆ.
ನನ್ನನೆ ನಿನ್ನಲ್ಲಿ ಅರಿದ ಕಾರಣ, ನನ್ನ ನಿನ್ನಲ್ಲಿ ಕಂಡೆ.
ಈ ಪರಿಯಿಂದ ಗುರು ಲಿಂಗ ಜಂಗಮ ಸಹಿತ,
ನಾ ನಿನ್ನೊಳಗಾದೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.