Index   ವಚನ - 151    Search  
 
ಚಂದ್ರನಿಲ್ಲದ ರಾತ್ರಿ, ಸೂರ್ಯನಿಲ್ಲದ ದಿವಸವೇತಕ್ಕೆ ಬಾತೆ? ಅಂತರಂಗ ಸನ್ನಿಹಿತವಾದ ಪರಶಿವನೆಂಬ ಗುರುವಿಲ್ಲದವನ, ಅರಿವು ಆಚಾರ ಕ್ರಿಯೆ ಭಕ್ತಿ ವಿರಕ್ತಿ ಏತಕ್ಕೆ ಬಾತೆ? ಇದು ಕಾರಣ, ಸ್ವಾನುಭಾವಿ ಗುರುವಿನ ಅನುವಿನಲ್ಲಿದ್ದು ಆಚರಿಸುವ,ಭಕ್ತನ ಆಚಾರ ಶುದ್ಧ, ಆತನ ಭಕ್ತಿ ಜ್ಞಾನ ವೈರಾಗ್ಯ ಶುದ್ಧ. ಆತನೇ ಮುಕ್ತನಯ್ಯ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.