Index   ವಚನ - 152    Search  
 
ಸಂಸಾರವೆಂಬ ಘೋರಾರಣ್ಯದೊಳಗೊಬ್ಬಳು, ಜಗವ ನುಂಗಿ ಉಗುಳುವ ಬಲು ರಕ್ಕಸಿಯಿದ್ದಾಳೆ. ಗಜ ವ್ಯಾಘ್ರ ಕ್ರೂರ ಮೃಗಂಗಳ ಭಯ ಘನ. ಹುಲ್ಲ ಬಿಲ್ಲಿನವ, ಕೈಯ ಹಗ್ಗದವ ಇವರಿಬ್ಬರು ಬಲುವ್ಯಾಧರು ಕಣುವೆಯ ಕಟ್ಟಿ ಐದಾರೆ ಆ ಕಡೆಗಡಿಯಿಡದಿರಣ್ಣ. ಭಕ್ತಿಗ್ರಾಮದತ್ತ ನಡೆಯಿರಣ್ಣ. ಎಡರಾಪತ್ತುಗಳಿಲ್ಲ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ, ಭಕ್ತಿಗ್ರಾಮದಲ್ಲಿ ಸುಖವಿಹಿರಣ್ಣ.